+91-9448602867 adavimata@gmail.com ಪಡುಗೂರು, ಗುಂಡ್ಲುಪೇಟೆ ತಾಲ್ಲೂಕು Paduguru, Gundlupete Taluk
ದರ್ಶನ ಸಮಯ: 6:00 AM - 8:30 PM Darshan: 6:00 AM - 8:30 PM

ಶ್ರೀ ಮಠದ ಸಮಾಜಮುಖಿ ಸೇವೆಗಳು

Social Welfare Services of Sri Matha

ಮಹಾಮನೆ ಉಚಿತ ಶಿಕ್ಷಣ
ಶಿಕ್ಷಣ ಸೇವೆ Education Seva

ಉಚಿತ ಶಿಕ್ಷಣ - ಮಹಾಮನೆ

೨೦೦೭ನೇ ವರ್ಷದಲ್ಲಿ 'ಮಹಾಮನೆ' ಎಂಬ ಹೆಸರಿನಲ್ಲಿ ಉಚಿತ ಶಿಕ್ಷಣ ಯೋಜನೆಯನ್ನು ಕೈಗೊಂಡು ಎಲ್ಲಾ ವರ್ಗದ ಬಡವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ೧ ರಿಂದ ೧೦ನೇ ತರಗತಿಯವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವ ಸಂಕಲ್ಪ ಮಾಡಲಾಯಿತು.

ಇಲ್ಲಿ ದಾಖಲಾದ ಮಕ್ಕಳಿಗೆ ಉಚಿತ ವಸತಿ, ಪೌಷ್ಟಿಕ ಸಾತ್ವಿಕ ಆಹಾರ, ಸಮವಸ್ತ್ರ, ಪುಸ್ತಕಗಳು ಹಾಗೂ ಆಧ್ಯಾತ್ಮಿಕ ಮತ್ತು ನೈತಿಕ ಸಂಸ್ಕಾರವನ್ನು ನೀಡಲಾಗುತ್ತಿದೆ. ಗ್ರಾಮೀಣ ಮಕ್ಕಳು ಸಮಾಜದ ಮುಂಚೂಣಿ ಸಾಲಿನಲ್ಲಿ ನಿಲ್ಲುವಂತೆ ಆತ್ಮವಿಶ್ವಾಸ ಮೂಡಿಸುವುದು ಈ ಯೋಜನೆಯ ಮುಖ್ಯ ಗುರಿ.

ಸಂಸ್ಥೆಯ ವಿವರ

Free Residential Education - Mahamane

Initiated in 2007, the 'Mahamane' Free Education Project ensures that talented children from economically disadvantaged rural families receive complete, free education from Class 1 to Class 10.

Students are provided free boarding, nutritious vegetarian meals, school uniforms, books, and spiritual mentoring in an atmosphere of warmth and disciplined learning, empowering them to excel in modern life.

Explore Institutions
ಹಿರಿಯರ ಮನೆ (ವೃದ್ಧಾಶ್ರಮ)
ಹಿರಿಯರ ಆರೈಕೆ Elder Care

ಹಿರಿಯರ ಮನೆ (ವೃದ್ಧಾಶ್ರಮ)

೨೦೨೨ನೇ ವರ್ಷದಲ್ಲಿ 'ಹಿರಿಯರ ಮನೆ' ಎಂಬ ಹೆಸರಿನಲ್ಲಿ ವೃದ್ಧಾಶ್ರಮವನ್ನು ಆರಂಭಿಸಲಾಯಿತು. ಇದು ಪಡುಗೂರು ಶ್ರೀ ಮಠದ ಪ್ರಶಾಂತ ಮತ್ತು ಪಾವನ ಆವರಣದಲ್ಲಿದ್ದು, ವಯೋವೃದ್ಧರಿಗೆ ಬೇಕಾದ ಸಕಲ ಸೌಕರ್ಯಗಳನ್ನು ಒಳಗೊಂಡಿದೆ.

ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ಜೀವಿಗಳಿಗೆ ನೆಮ್ಮದಿಯ ವಾತಾವರಣ, ಸಾತ್ವಿಕ ಬಿಸಿ ಊಟ, ಪ್ರಾರ್ಥನೆ, ಯೋಗ ಹಾಗೂ ಪ್ರೀತಿಯ ಆರೈಕೆಯನ್ನು ಇಲ್ಲಿ ಒದಗಿಸಲಾಗುತ್ತಿದೆ. ನಿಸ್ವಾರ್ಥ ಸೇವೆಯ ಮೂಲಕ ಹಿರಿಯರಲ್ಲಿ ನವಚೈತನ್ಯ ತುಂಬುವುದು ಮಠದ ಧ್ಯೇಯ.

Hiriyara Mane (Old Age Home)

Founded in 2022, 'Hiriyara Mane' is a compassionate residential elder home located within the tranquil, sacred campus of Sri Adavimatha.

Senior citizens in their twilight years are welcomed with warm dignified care, fresh nutritious meals, regular medical checkups, spiritual prayers, and a peaceful green ambiance where they live with respect and happiness.

ವೈದ್ಯಕೀಯ ತಪಾಸಣೆ Regular Healthcare
ಪ್ರೀತಿಪೂರ್ವಕ ಆರೈಕೆ Loving Compassion
ಗೋಶಾಲೆ ಮತ್ತು ಸಾವಯವ ಕೃಷಿ
ಗೋ ಸಂರಕ್ಷಣೆ Cow Sanctuary

ಜಾನುವಾರುಗಳಿಗೆ ಆಸರೆ - ಗೋಶಾಲೆ & ಮಾದರಿ ಕೃಷಿ

ಶ್ರೀ ಮಠವು ವ್ಯವಸಾಯದೊಂದಿಗೆ ಹಲವಾರು ವರ್ಷಗಳಿಂದ ದೇಸಿ ಜಾನುವಾರುಗಳನ್ನು ಪೋಷಿಸಿಕೊಂಡು ಬರುತ್ತಿದೆ. ಸ್ಥಳೀಯ ದೇಸಿ ತಳಿಯ ಗೋವುಗಳ ಸಂರಕ್ಷಣೆಗಾಗಿ ಪ್ರತ್ಯೇಕ ಸುಸಜ್ಜಿತ ಗೋಶಾಲೆಯನ್ನು ನಿರ್ವಹಿಸಲಾಗುತ್ತಿದೆ.

ಗೋವಿನ ಪಂಚಗವ್ಯ ಹಾಗೂ ಕೊಟ್ಟಿಗೆ ಗೊಬ್ಬರವನ್ನು ಬಳಸಿಕೊಂಡು ಮಠದ ಕೃಷಿ ಭೂಮಿಯಲ್ಲಿ ಸಂಪೂರ್ಣ ವಿಷಮುಕ್ತ ಸಾವಯವ ಪದ್ಧತಿಯಲ್ಲಿ ಧಾನ್ಯಗಳು, ಹಸಿರು ಮೇವು ಹಾಗೂ ತರಕಾರಿಗಳನ್ನು ಬೆಳೆಯಲಾಗುತ್ತಿದ್ದು, ಇದು ಸುತ್ತಮುತ್ತಲಿನ ರೈತರಿಗೆ ಆದರ್ಶ ಮಾದರಿಯಾಗಿದೆ.

Goshala (Cattle Sanctuary) & Organic Farming

Sri Matha has nurtured indigenous dairy breeds for decades. A modern, clean Goshala preserves local native cows with nutritious green fodder and compassionate shelter.

By utilizing natural cow manure and traditional techniques, the Matha cultivates chemical-free cereals, vegetables, and greens on its vast agricultural estate, standing as a practical educational model for sustainable rural farming.

ದಾಸೋಹ ಭವನ
ನಿತ್ಯ ಕೈಂಕರ್ಯ Daily Offering

ನಿತ್ಯ ಅನ್ನದಾಸೋಹ ಪರಂಪರೆ

'ಅನ್ನದಾನವೇ ಪರಮದಾನ'. ಶ್ರೀ ಮಠಕ್ಕೆ ದೂರದೂರುಗಳಿಂದ ಆಗಮಿಸುವ ಭಕ್ತಾದಿಗಳಿಗೆ, ಯಾತ್ರಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿದಿನವೂ ಮಧ್ಯಾಹ್ನ ಪ್ರೀತಿಪೂರ್ವಕವಾಗಿ ರುಚಿಕರ ಸಾತ್ವಿಕ ಮಹಾಪ್ರಸಾದ ದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರೂ ಒಂದಾಗಿ ಕುಳಿತು ಪ್ರಸಾದ ಸ್ವೀಕರಿಸುವ 'ದಾಸೋಹ ಭವನ'ವು ಸಮಾನತೆಯ ಸಂಕೇತವಾಗಿ ಬೆಳಗುತ್ತಿದೆ.

Eternal Tradition of Annadasoha (Free Meals)

"Food sharing is the supreme gift." Daily wholesome vegetarian meals (Mahaprasada) are served with deep reverence to all visiting pilgrims, travelers, and students every afternoon.

Without distinction of caste, creed, or status, all sit together as equals in the sprawling 'Dasoha Bhavana', experiencing the true spirit of Sharana brotherhood.

ಸಾಮಾಜಿಕ ಸೇವೆಗಳಿಗೆ ನಿಮ್ಮ ನೆರವು ನೀಡಿ Support Our Social Services

ಮಹಾಮನೆ ಬಡ ವಿದ್ಯಾರ್ಥಿಗಳ ಶಿಕ್ಷಣ, ಹಿರಿಯರ ಮನೆಯ ವೃದ್ಧರ ಸೇವೆ, ಗೋ ಸಂರಕ್ಷಣೆ ಅಥವಾ ಅನ್ನದಾಸೋಹಕ್ಕೆ ಕೈಜೋಡಿಸಲು ಇಚ್ಛಿಸುವ ಭಕ್ತಾದಿಗಳು ನೇರವಾಗಿ ಶ್ರೀ ಮಠವನ್ನು ಸಂಪರ್ಕಿಸಬಹುದು.

Devotees wishing to contribute towards Mahamane students' education, elder healthcare, Goshala cow protection, or daily Annadasoha are warmly welcomed to contact the Matha.