ಶ್ರೀ ಮದ್ದಾನೇಶ್ವರ ವಿದ್ಯಾಸಂಸ್ಥೆಗಳು
ಪೂಜ್ಯ ಶ್ರೀ ಶಿವಲಿಂಗೇಂದ್ರಸ್ವಾಮಿಗಳು ಪಡುಗೂರು ಮಠದ ಕಿರಿಯ ಶ್ರೀಗಳಾಗಿ ಶ್ರೀ ಶಿವಕುಮಾರಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಾ ಬಂದರು. ಪಟ್ಟಾಧಿಕಾರ ದೊರೆತ ನಂತರ ಸುಮಾರು ೮ ವರ್ಷಗಳವರೆಗೆ ಹಿರಿಯ ಶ್ರೀಗಳ ಸೇವೆಯನ್ನು ಮಾಡಿದ್ದಾರೆ. ಮಠದ ಜವಾಬ್ದಾರಿಯನ್ನು ಕ್ರಮವಾಗಿ ಹೊತ್ತು ಕ್ಷೇತ್ರಾಭಿವೃದ್ಧಿಯನ್ನು ಮಾಡುತ್ತಾ ಬಂದಿದ್ದಾರೆ.
ಮೊದಮೊದಲು ಮಠದ ವ್ಯವಸಾಯ, ದಾಸೋಹ, ಪೂಜಾಕಾರ್ಯಗಳಲ್ಲಿ ಮಾತ್ರ ತೊಡಗಿಸಿಕೊಂಡು ಅನುಭವವನ್ನು ಗಳಿಸಿದರು. ಕಬ್ಬಹಳ್ಳಿ ಮತ್ತು ಮೈಸೂರಿನ ವಿದ್ಯಾರ್ಥಿನಿಲಯಗಳನ್ನು ನಡೆಸುವಷ್ಟರಲ್ಲಿಯೇ ಸೀಮಿತವಾಗಿದ್ದ ಇವರ ಸಮಾಜಸೇವೆ ಕ್ರಮೇಣ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಮೂಲಕ ವಿಸ್ತಾರಗೊಳ್ಳತೊಡಗಿತು.
ಅದರ ಫಲವಾಗಿ ಹಿರಿಯ ಶ್ರೀಗಳು ಲಿಂಗೈಕ್ಯರಾದ (೧೯೯೫) ನಂತರ ೧೯೯೬ರಲ್ಲಿ ಶ್ರೀ ಮದ್ದಾನೇಶ್ವರ ವಿದ್ಯಾಸಂಸ್ಥೆಯನ್ನು ತೆರೆಯುವ ಮೂಲಕ ಗುಂಡ್ಲುಪೇಟೆ ಪಟ್ಟಣದಲ್ಲಿ ನರ್ಸರಿ, ಕಿರಿಯ ಮತ್ತು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಆರಂಭಿಸಿದರು.
Sri Maddaneshwara Educational Institutions
H.H. Sri Shivalingendra Swamiji served with supreme devotion under the guidance of Late Sri Shivakumara Swamiji. Dedicated to the vision of holistic social transformation, Swamiji expanded the early boarding facilities of Kabbahalli and Mysuru into vibrant modern schools.
Following the Mahasamadhi of the senior seer in 1995, Swamiji established the Sri Maddaneshwara Vidya Samsthe in 1996 at Gundlupete, encompassing Nursery, Lower Primary, Higher Primary, and High School education.
Today, these institutions stand as beacons of academic brilliance, moral discipline, and cultural values for rural students across Chamarajanagar district.
ಉಚಿತ ಶಿಕ್ಷಣ ಯೋಜನೆ: 'ಮಹಾಮನೆ'
ಇವುಗಳ ಜೊತೆಗೆ ೨೦೦೭ನೇ ವರ್ಷದಲ್ಲಿ 'ಮಹಾಮನೆ' ಎಂಬ ಹೆಸರಿನಲ್ಲಿ ಉಚಿತ ಶಿಕ್ಷಣ ಯೋಜನೆಯನ್ನು ಕೈಗೊಂಡು, ಎಲ್ಲಾ ವರ್ಗದ ಬಡವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ೧ ರಿಂದ ೧೦ನೇ ತರಗತಿಯವರೆಗೆ ಸಂಪೂರ್ಣ ಉಚಿತ ಶಿಕ್ಷಣ, ಉಚಿತ ವಸತಿ ಹಾಗೂ ಪೌಷ್ಟಿಕ ಆಹಾರ ನೀಡಬೇಕೆಂಬ ನಿರ್ಧಾರವನ್ನು ಮಾಡಿ ಅದರಂತೆ ಈವರೆಗೂ ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದಾರೆ.
'ಮಹಾಮನೆ'ಯಲ್ಲಿ ಪ್ರಸ್ತುತ ೬೫ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೆ ಪ್ರೀತಿ-ಕಾಳಜಿಯ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ.
Free Residential Education: 'Mahamane'
In 2007, Sri Matha initiated the landmark 'Mahamane' Free Education Project, dedicated to ensuring that poverty never hinders a child's right to knowledge. The initiative offers 100% free residential schooling, study materials, and wholesome meals from Class 1 to Class 10.
Presently, over 65 talented rural students live, learn, and flourish in this loving, secure gurukula-style sanctuary without paying a single rupee.
ಮಹಾಮನೆ ಭವನದ ಭವ್ಯ ಉದ್ಘಾಟನೆ Grand Inauguration of Mahamane Building
ಮಹಾಮನೆ ಉಚಿತ ಶಿಕ್ಷಣ ಯೋಜನೆಗಾಗಿ ಗುಂಡ್ಲುಪೇಟೆ ಪಟ್ಟಣದ ವಿದ್ಯಾಸಂಸ್ಥೆಯ ಆವರಣದಲ್ಲಿ ಸುಂದರವಾದ ನೂತನ ಕಟ್ಟಡವೊಂದನ್ನು ನಿರ್ಮಿಸಿ, ೨೦೦೯ರ ಸೆಪ್ಟೆಂಬರ್ ೨೭ರಂದು ಸುತ್ತೂರು ವೀರಸಿಂಹಾಸನಾಧೀಶ್ವರರಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ. ಎಸ್. ಯಡಿಯೂರಪ್ಪನವರಿಂದ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಅಂದಿನ ಐತಿಹಾಸಿಕ ಸಮಾರಂಭದ ಅಧ್ಯಕ್ಷತೆಯನ್ನು ಗುಂಡ್ಲುಪೇಟೆ ಕ್ಷೇತ್ರದ ಶಾಸಕರಾಗಿದ್ದ ಶ್ರೀ ಹೆಚ್. ಎಸ್. ಮಹದೇವಪ್ರಸಾದ್ ರವರು ವಹಿಸಿದ್ದರು. ಚಾಮರಾಜನಗರ ಕ್ಷೇತ್ರದ ಸಂಸದರಾಗಿದ್ದ ಶ್ರೀ ಆರ್. ಧ್ರುವನಾರಾಯಣ್ ರವರು, ಸಚಿವರಾಗಿದ್ದ ಹಾಲಪ್ಪನವರು ಹಾಗೂ ತಾಲ್ಲೂಕಿನ ಜನನಾಯಕರಾದ ಶ್ರೀ ಸಿ. ಎಸ್. ನಿರಂಜನ ಕುಮಾರ್, ಶ್ರೀ ಎಂ. ಪಿ. ವೃಷಭೇಂದ್ರಪ್ಪ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
To support the Mahamane initiative, an elegant modern campus was built in Gundlupete town. On September 27, 2009, in the divine presence of Suttur Pontiff Jagadguru Sri Shivarathri Deshikendra Mahaswamiji, the building was officially inaugurated by then Chief Minister of Karnataka, Sri B. S. Yediyurappa.
The historic assembly was presided over by then Gundlupete MLA Sri H. S. Mahadeva Prasad, with Member of Parliament Sri R. Dhruvanarayana, Cabinet Minister Sri Halappa, Sri C. S. Niranjan Kumar, Sri M. P. Vrishabhendrappa, and prominent dignitaries gracing the occasion as chief guests.
ಶಿಕ್ಷಣ ವಿಭಾಗಗಳು & ಸೌಲಭ್ಯಗಳು Academic Divisions & Facilities
ಪೂರ್ವ ಪ್ರಾಥಮಿಕ (ನರ್ಸರಿ)
Early Childhood (Nursery)
ಚಿಕ್ಕ ಮಕ್ಕಳಲ್ಲಿ ಕಲಿಯುವ ಆಸಕ್ತಿ, ಸೃಜನಶೀಲತೆ ಹಾಗೂ ಉತ್ತಮ ನಡತೆಗಳನ್ನು ಆಟ-ಪಾಠಗಳ ಮೂಲಕ ಮೂಡಿಸುವ ಅತ್ಯಾಧುನಿಕ ತರಗತಿಗಳು.
Nurturing curiosity, foundational skills, and joyful learning in young children through play-based and creative teaching.
ಪ್ರಾಥಮಿಕ & ಮಾಧ್ಯಮಿಕ ಶಾಲೆ
Primary & Middle School
ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ನುರಿತ ಶಿಕ್ಷಕ ವೃಂದದಿಂದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಗ್ರ ಬೋಧನೆ.
Holistic instruction in Kannada and English media by dedicated faculty, balancing scholastic rigor and co-curriculars.
ಪ್ರೌಢಶಾಲೆ (ಹೈಸ್ಕೂಲ್)
High School (SSLC)
ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಶೇಕಡಾ ನೂರರಷ್ಟು ಉತ್ತಮ ಫಲಿತಾಂಶ ದಾಖಲಿಸುತ್ತಾ, ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲಾಗುತ್ತದೆ.
Consistently achieving top pass percentages in state SSLC examinations while molding discipline, character, and leadership.